ಸಮಂತಾ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕಮರ್ಷಿಯಲ್ ಬ್ರ್ಯಾಂಡ್ಗಳನ್ನು ಪ್ರಮೋಟ್ ಮಾಡಿದರೆ ಅವರಿಗೆ ಹಣ ಸಿಗುತ್ತದೆ. ಜಾಹೀರಾತುಗಳಲ್ಲಿ ನಟಿಸಿದರೆ ಸಮಂತಾಗೆ ದುಬಾರಿ ಸಂಭಾವನೆ ನೀಡುತ್ತಾರೆ. ಇನ್ನೂ ಕೆಲವು ಅಂಗಡಿಗಳ ಉದ್ಘಾಟನೆಗೆ ಅತಿಥಿಯಾಗಿ ಹೋಗುವ ಮೂಲಕವೂ ಸಮಂತಾ ಸಂಪಾದನೆ ಮಾಡುತ್ತಾರೆ. ಮೂಲಗಳ ಪ್ರಕಾರ ಒಂದು ಅಂಗಡಿಯ ಉದ್ಘಾಟನೆಗೆ ಬಂದರೆ ಅವರು 15 ಲಕ್ಷ ರೂಪಾಯಿ ಪಡೆಯುತ್ತಾರಂತೆ. ನೀವು ಕೂಡ ಸಮಂತಾ ಅವರನ್ನು ನಿಮ್ಮ ಕಾರ್ಯಕ್ರಮಕ್ಕೆ ಕರೆಸಬೇಕು ಅಂದರೆ 15 ಲಕ್ಷವನ್ನು ರೆಡಿ ಮಾಡಿಕೊಳ್ಳಿ. ಮೊನ್ನೆ ನಲಗುಂದಾದಲ್ಲಿ ಒಂದು ಅಂಗಡಿ ಕಾರ್ಯಕ್ರಮಕ್ಕೆ ಸಮಂತಾ ಹೋಗಿದ್ದರು. ತಮ್ಮ ನೆಚ್ಚಿನ ನಟಿ ನೋಡಲು ಸಾವಿರಾರು ಮಂದಿ ಅಲ್ಲಿ ಸೇರಿದ್ದರು.
ಹೌದು, ಜಿಮ್ನಲ್ಲಿನ ಸಖತ್ ವರ್ಕೌಟ್ ಮಾಡುವ ಸಮಂತಾ, ಈ ಬಾರಿ ಡಿಫ್ರೆಂಟ್ ಆಗಿ ವರ್ಕೌಟ್ ಮಾಡಿದ್ದಾರೆ. ಈ ವಿಡಿಯೋ ಇದಿಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನಾಗಿಣಿ ತರ ನಂಗಾನಾಚ್ ಮಾಡಿದ್ದಾರೆ ಸಮಂತಾ. ಅಂದಹಾಗೇ ಇದು ಇವರು ಮಾಡಿರೋದಲ್ಲ. ಇವರ ಜಿಮ್ ಕೋಚ್ ಈ ರೀತಿಯ ಹೊಸ ವರ್ಕೌಟ್ ಮಾಡಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ಸಮಂತಾ ನಾಗಿಣಿ ಡ್ರಿಲ್ ಅಂತ ಕ್ಯಾಪ್ಷನ್ ಕೊಟ್ಟು ಇನ್ಸ್ಟಾಗ್ರಾಂ ಸ್ಟೋರಿಸ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನಿಮ್ಮ ಹೊಸ ವರ್ಕೌಟ್ ಸೂಪರ್ ಆಗಿದೆ ಮ್ಯಾಮ್ ಎಂದು ಕಮೆಂಟ್ ಮಾಡುತ್ತಿದ್ದಾರೆ.