- ಇತ್ತೀಚೆಗೆ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಸಾವಿನ ವಿಚಾರವಾಗಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ ಪ್ರಕರಣದ ಬಿಸಿ ಇನ್ನೂ ಆರಿಲ್ಲ. ದಿನವೂ ಹರ್ಷ ಕೊಲೆ ಪ್ರಕರಣದ ವಿಚಾರ ಒಂದಲ್ಲ ಒಂದು ರೀತಿಯಲ್ಲಿ ಮುನ್ನೆಲೆಗೆ ಬರುತ್ತಿದೆ.
ಹರ್ಷ ಕುಟುಂಬಕ್ಕೆ ಧನಸಹಾಯ ಪ್ರಕ್ರಿಯೆ, ಕುಟುಂಬಸ್ಥರ ಭೇಟಿ, ಸಂತಾಪ-ಸಂತ್ವಾನಗಳು ಇನ್ನೂ ಮುಂದುವರಿದಿದ್ದು, ಮನೆಯವರ ದುಃಖವೂ ಉಮ್ಮಳಿಸಿ ಬರುತ್ತಲೇ ಇದೆ. ಈ ಮಧ್ಯೆ ಹರ್ಷ ಸಾವಿನ ಮುನ್ಸೂಚನೆ ಒಂದು ತಿಂಗಳ ಮೊದಲೇ ಸಿಕ್ಕಿತ್ತಾ? ಎಂಬ ವಿಚಾರವೊಂದು ಮೂಡಿದೆ. ಇಂದು ಶಾಸಕ ಎಂ.ಪಿ.ರೇಣುಕಾಚಾರ್ಯ-ಸುಮಾ ದಂಪತಿ ಹರ್ಷ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವೇಳೆ ಇಂಥದ್ದೊಂದು ವಿಷಯ ತಿಳಿದುಬಂದಿದೆ.