ಸಕಲೇಶಪುರ : ‘ತರಕಾರಿ, ಮೀನು ಮಾರಾಟ ಮಾಡಲು ಮುಸ್ಲಿಮರು ಹಿಂದೂಗಳ ಮನೆಯ ಬಳಿ ಬಂದರೆ ನಮ್ಮ ಮನೆಯಲ್ಲಿರುವ ಕೋವಿಯಿಂದ ಗುಂಡು ಹಾರಿಸಬೇಕಾಗುತ್ತದೆ’ ಎಂದು ಬಜರಂಗದಳ ಮುಖಂಡನೋರ್ವ ವಿದಾತ್ಮಕ ಹೇಳಿಕೆ ನೀಡಿದ್ದಾನೆ.

ಗೋ ಹತ್ಯೆ ತಡೆಯುವಲ್ಲಿ ಪೋಲಿಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ಬಜರಂಗದಳದ ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡ ರಘು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.

”ತರಕಾರಿ, ಮೀನು ಮಾರಾಟ ಮಾಡಲು ಹಿಂದೂಗಳ ಮನೆಯ ಬಳಿ ಬರುವಂತ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ, ಇಲ್ಲಾಂದ್ರೆ ನಮ್ಮಲ್ಲಿರುವ ಕೋವಿಯೊಳಗಿನ ಗುಂಡು ಹೊರಗಡೆ ಬರುತ್ತೆ, ನಾವು ಕೂಡ ಗುಂಡು ಹಾರಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾನೆ.

ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚಿಗೆ ಮಾತನಾಡುತ್ತಾ ಆದಳ ಈ ದಳ ಎಂದು ಹೇಳಿದ್ದಾರೆ, ನೇರವಾಗಿ ಬಜರಂಗದಳ ಹೇಳಲಿ ಆಗ ನಾವು ನಮ್ಮ ಬಜರಂಗದಳದ ತಾಕತ್ತು ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾನೆ.

Leave a Reply

Your email address will not be published. Required fields are marked *