ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಜಿಯೋಫಿಸಿಕ್ಸ್ ಸಂಸ್ಥೆ ತಿಳಿಸಿದೆ.
ಸೋಮವಾರ ಬೆಳಗ್ಗೆ ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಭೂಮಿಯಿಂದ 33 ಕಿಮೀ ಆಳದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಜಿಯೋಫಿಸಿಕ್ಸ್ ಸಂಸ್ಥೆ ತಿಳಿಸಿದೆ.
ಆದ್ರೆ, ಇಲ್ಲಿ ಸಂಭವಿಸಿದ ಭೂಕಂಪದಿಂದ ಯಾವುದೇ ಸುನಾಮಿ ಸಂಭಾವ್ಯತೆ ಇಲ್ಲ ಎಂದು ಹೇಳಿದರು.
ಪಪುವಾದ ರಾಜಧಾನಿ ಜಯಪುರದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯ ಪೊಲೀಸ್ ವಕ್ತಾರ ಇಗ್ನೇಷಿಯಸ್ ಬೆನ್ನಿ ಆದಿ ಪ್ರಬೋವೊ ಅವರು ತಿಳಿಸಿದ್ದಾರೆ, ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.