ನಟ ಕಿಚ್ಚ ಸುದೀಪ್ ವಿರುದ್ಧ ಹಿರಿಯ ನಿರ್ಮಾಪಕ ಅಸಮಾಧಾನ ಹೊರಹಾಕಿದ್ದಾರೆ. ನಟ ಸುದೀಪ್ ಸಿನಿಮಾಗೆ ಕಮೀಟ್ ಆಗಿ ಕೈಗೆ ಸಿಗದೆ ಓಡಾಡ್ತಿದ್ದಾರೆ ಎಂದು ನಿರ್ಮಾಪಕ ಎನ್. ಕುಮಾರ್ ಆರೋಪಿಸಿದ್ದಾರೆ. ನಟ ಸುದೀಪ್ ಬಗ್ಗೆ ಫಿಲ್ಮ್ ಚೇಂಬರ್ ನಲ್ಲಿ ಸುದ್ದಿಗೋಷ್ಠಿ ಮಾಡಿ ಮಾತಾಡಿದ ನಿರ್ಮಾಪಕ ಕುಮಾರ್, ನಾನು ಸುದೀಪ್ ಅವ್ರಿಗೆ ಹಲವಾರು ಸಿನಿಮಾಗಳ ನಿರ್ಮಾಣ ಮತ್ತು ವಿತರಣೆ ಮಾಡಿದ್ದೀನಿ. ಆದ್ರೆ ಈ ಸಿನಿಮಾ ಕಾಲ್ ಶೀಟ್ ನೀಡದೆ ತಪ್ಪಿಸಿಕೊಂಡು ಓಡಾಡ್ತೀದ್ದಾರೆ ಎಂದು ಕುಮಾರ್ ಹೇಳಿದ್ದಾರೆ. ಎಂಟು ವರ್ಷದಿಂದ ಸುದೀಪ್ ಕಾಯಿಸುತ್ತಿದ್ದಾರೆ
ನನ್ನ ಹಾಗೂ ಸುದೀಪ್ ಅವರ ಜೊತೆಗಿನ ಬಾಂದವ್ಯ ಚೆನ್ನಾಗಿತ್ತು. ಸುಮಾರು ಎಂಟು ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ಸುದೀಪ್ ಇವತ್ತು ನಾಳೆ ಅಂತ ಹೇಳಿಕೊಂಡೆ ಬರ್ತಿದ್ದಾರೆ. ನಿಮ್ಮ ಸಿನಿಮಾನೇ ನೇಕ್ಸ್ಟ್ ಅಂತ ಹೇಳಿದ್ರು ಅದ್ರೆ ಇಲ್ಲಿಯವರೆಗೂ ಸಿನಿಮಾ ಬಗ್ಗೆ ಮಾತಾಡುತ್ತಿಲ್ಲ.
ಸುದೀಪ್ ಗೊಂದಲ ಉಂಟು ಮಾಡಿದ್ದ ನಟ ಸುದೀಪ್ ಗೊಂದಲ ಕ್ರಿಯೇಟ್ ಮಾಡುತ್ತಿದ್ದಾರೆ. ಕೈಗೆ ಸಿಗದೆ ಓಡಾಡುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ವಾಣಿಜ್ಯ ಮಂಡಳಿಗೆ ಮನವಿ ಪತ್ರ ಬರೆದಿದ್ದೇನೆ. ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾವು ಯಾರತ್ರ ಹೋಗಿ ಹೇಳಬೇಕು ಎಂದು ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.