ತಿರುಪತಿ ತಿಮ್ಮಪ್ಪನಿಗೆ ‘ಮುಡಿ’ ಕೊಟ್ಟ ಖ್ಯಾತ ನಟ ಧನುಷ್ ‘ಮುಡಿ’ ಕೊಟ್ಟ ಫೋಟೋಗಳು ವೈರಲ್ ಆಗಿದೆ. ನಿರ್ದೇಶಕ ಅರುಣ್ ಮಾಥೇಶ್ವರನ್ ಅವರ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಧನುಷ್ ಜುಲೈ 3 ರಂದು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ನಡುವೆ ಅವರು ತಮ್ಮ ಇಬ್ಬರು ಪುತ್ರರಾದ ಯಾತ್ರಾ ಮತ್ತು ಲಿಂಗ ಮತ್ತು ಅವರ ಹೆತ್ತವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದರು.
ಮುಂಜಾನೆಯ ದರ್ಶನದ ಹೊರತಾಗಿ, ಧನುಷ್, ಯಾತ್ರಾ ಮತ್ತು ಲಿಂಗಾ ಅವರು ತಮ್ಮ ಮುಡಿಗಳನ್ನು ಅರ್ಪಿಸಲಾಗಿದ ಎನ್ನಲಾಗಿದೆ. ಸ್ಟಾರ್ ಧನುಷ್ ಮತ್ತು ಅವರ ಕುಟುಂಬ ಸದಸ್ಯರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.