ನವದೆಹಲಿ : ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್. ಇತ್ತೀಚೆಗೆ, ಅವರು ಚಿತ್ರೀಕರಣಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗೆ ತೆರಳಿದ್ದು, ಈ ವೇಳೆ ಅಪಘಾತವಾಗಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಎಸ್ ಆರ್ ಕೆ ಯುಎಸ್ ನಲ್ಲಿ ಯೋಜನೆಯ ಚಿತ್ರೀಕರಣದಲ್ಲಿ ತೊಡಗಿದ್ದಾಗ ಅಪಘಾತಕ್ಕೊಳಗಾಗಿ ಮೂಗಿಗೆ ಗಾಯವಾಯಿತು ಎನ್ನಲಾಗಿದ್ದು, ಮೂಗಿನಲ್ಲಿ ರಕ್ತಸ್ರಾವ ಉಂಟಾದ ಹಿನ್ನಲೆಯಲ್ಲಿ ನಟನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಮತ್ತು ಅದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎನ್ನಲಾಗಿದೆ.