ಬೆಂಗಳೂರು : ರಾಜ್ಯಾದ್ಯಂತ ಚುರುಕುಗೊಂಡಿರುವ ಮುಂಗಾರು ಮಳೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ತುಸು ಬಿಡುವು ನೀಡಿದಂತೆ ಕಾಣುತ್ತಿದೆ. ಕಾರಣ ಪ್ರತಿ ವರ್ಷ ಮೇ ತಿಂಗಳ ಮಧ್ಯ ಭಾಗದಲ್ಲಿಯೇ ವ್ಯಾಪಕವಾಗಿ ಸುರಿಯುತ್ತಿದ್ದ ಮಳೆ ಜೂನ್ ಮೊದಲ ವಾರದಲ್ಲೂ ಸಹಿತ ಅಷ್ಟಾಗಿ ಅಬ್ಬರಿಸದೇ ದಿನ ಬಿಟ್ಟು ದಿನ ಹಗುರದಿಂದ ಸಾಧಾರಣವಾಗಿ ಸುರಿಯುತ್ತಿದೆ.
ಇದೇ ವಾತಾವರಣ ಜುಲೈ 08 ರವರೆಗೂ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ದೊರೆತ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಸಂಜೆ ನಂತರ ಆಗಾಗ ತುಂತುರು ಇಲ್ಲವೇ ಸಾಧಾರಣವಾಗಿ ಮಳೆ ದಾಖಲಾಗಿದೆ. ಬಿಸಿಲು ಅಷ್ಟಾಗಿ ಬಾರದೆ ದಿನವಿಡೀ ತಂಪು ಮತ್ತು ಚಳಿಯ ವಾತಾವರಣದ ಅನುಭವ ಆಗುತ್ತಿದೆ.