ಬೆಂಗಳೂರು : ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಡಬ್ಬಲ್ ಮರ್ಡರ್ ನಡೆಸಲಾಗಿತ್ತು. ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಒಳ ನುಗ್ಗಿದ್ದಂತ ಆರೋಪಿಗಳು ಕಂಪನಿಯ ಎಂಡಿ ಫಣೀಂದ್ರ ಹಾಗೂ ಸಿಇಓ ವಿನುಕುಮಾರ್ ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ಸುಫಾರಿ ಕೊಟ್ಟಿದ್ದಂತ ಜಿ-ನೆಟ್ ಕಂಪನಿ ಮಾಲೀಕ, ಎಎಪಿ ಮುಖಂಡ ಅರುಣ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಲಿಕಾನ್ ಸಿಟಿ ಜನರು ಬೆಚ್ಚಿ ಬಿದ್ದಿದ್ದಂತ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಎಂ.ಡಿ ಫಣೀಂದ್ರ, ಸಿಇಒ ವಿನುಕುಮಾರ್ ಹತ್ಯೆ ಪ್ರಕರಣದಲ್ಲಿ ಆರೋಪಿ ಅರುಣ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಈತ ಜಿ-ನೆಟ್ ಕಂಪನಿ ಮಾಲೀಕ, ಎಎಪಿ ಮುಖಂಡ ಎಂಬುದಾಗಿ ತಿಳಿದು ಬಂದಿದೆ.
ಆರೋಪಿ ಅರುಣ್ ಕುಮಾರ್ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ, ಸಿಇಓ ವಿನುಕುಮಾರ್ ಹತ್ಯೆಗೆ ಸುಫಾರಿ ನೀಡಿದ್ದಾಗಿ ಪೊಲೀಸರ ವಿಚಾರಣೆಯ ವೇಳೆಯಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಈಗಾಗಲೇ ಇದೇ ಪ್ರಕಣದಲ್ಲಿ ಫಿನೆಕ್ಸ್ ಹಾಗೂ ಮತ್ತೊಬ್ಬನನ್ನು ಬಂಧಿಸಲಾಗಿದೆ.