ನವದೆಹಲಿ: ಆರ್ಟ್ ಆಫ್ ಲಿವಿಂಗ್ ಸ್ಥಾಪಕ, ಅಧ್ಯಾತ್ಮ ಜಗತ್ತಿನ ಮೇರುಸಾಧಕ ಶ್ರೀಶ್ರೀ ರವಿಶಂಕರ್ ಗುರುಗಳಿಗೆ ಅಪರೂಪದ ಗೌರವವೊಂದು ಲಭಿಸಿದೆ. ಅಮೆರಿಕ ಮತ್ತು ಕೆನಡಾದ 30 ನಗರಗಳು ಶ್ರೀಶ್ರೀ ರವಿಶಂಕರ್ ದಿನಾಚರಣೆಯ ದಿನಗಳನ್ನು ಘೋಷಿಸಿವೆ. ಇಂತಹದ್ದೊಂದು ಗೌರವ ಪಡೆದ ಭಾರತದ ಮೊದಲ ಮತ್ತು ಏಕೈಕ ಆಧ್ಯಾತ್ಮಿಕ ಗುರು ಎಂಬ ಹೆಗ್ಗಳಿಕೆಯನ್ನು ಶ್ರೀಶ್ರೀ ರವಿಶಂಕರ್ ಗುರುಗಳು ಪಡೆದುಕೊಂಡಿದ್ದಾರೆ.
ಈಗಾಗಲೇ ಶ್ರೀಶ್ರೀ ರವಿಶಂಕರ್ ದಿನಾಚರಣೆ ನಡೆಯುತ್ತಿತ್ತು. ಇದೀಗ ನೂತನವಾಗಿ ಅಮೆರಿಕದ ಮೇರಿಲ್ಯಾಂಡ್‌ನ ಹೊವಾರ್ಡ್ ಕೌಂಟಿ ಹಾಗೂ ಟೆಕ್ಸಾಸ್ ರಾಜ್ಯಗಳು ಶ್ರೀಶ್ರೀ ರವಿಶಂಕರ್ ದಿನಾಚರಣೆಯ ದಿನಾಂಕಗಳನ್ನು ಘೋಷಿಸಿವೆ.
ಜಾಗತಿಕ ಶಾಂತಿಸ್ಥಾಪನೆಗೆ ಅವಿಶ್ರಾಂತವಾಗಿ ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀಶ್ರೀ ರವಿಶಂಕರ್ ಗುರುಗಳು ದುಡಿಯುತ್ತಿದ್ದಾರೆ. ಸೇವೆ ಸಲ್ಲಿಸುತ್ತ ಶಾಂತಿ ಹರಡುತ್ತಿದ್ದಾರೆ, ಸಂತೋಷವನ್ನು ಬೆಳೆಸುತ್ತ ಸಂಘರ್ಷಗಳನ್ನು ಇಲ್ಲ ಮಾಡುತ್ತಿದ್ದಾರೆ, ಸಮುದಾಯಗಳನ್ನು ಒಗ್ಗೂಡಿಸುತ್ತಿದ್ದಾರೆ ಎಂದು ಸಂಬಂಧಪಟ್ಟ ರಾಜ್ಯಗಳು ಹೇಳಿವೆ. ಹೊವಾರ್ಡ್ ಕೌಂಟಿ ಜು.22, ಟೆಕ್ಸಾಸ್ ಜು.29, ಬರ್ಮಿಂಗ್‌ಹ್ಯಾಮ್ ಜು.25 ಅನ್ನು ಶ್ರೀಶ್ರೀ ರವಿಶಂಕರ್ ದಿನವೆಂದು ಘೋಷಿಸಿವೆ. ಕಳೆದ ತಿಂಗಳು ಅಲೆಘೆನಿ ಕೌಂಟಿ ಶ್ರೀಶ್ರೀಗಳ ಸಾಧನೆಯನ್ನು ಗೌರವಿಸಿತ್ತು.