ಕಾಂತಾರ ಮೂಲಕ ಮೋಡಿ ಮಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ. ಸದ್ಯ ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ವಿಚಾರವೊಂದು ಹೊರಬಿದ್ದಿದೆ. ರಾಮ್‌ರಾಜ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಟ ರಾಕಿಂಗ್ ಯಶ್ ಯಶ್ ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು.
ಈ ವರ್ಷ ರಿಷಬ್ ಅವರು ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ. ಪಾಲಾಗಿದೆ. ಇ ‘ಕಾಂತಾರ’ ಸಿನಿಮಾ ಸಮಯದಿಂದಲೂ ರಿಷಬ್ ಹೆಚ್ಚು ಪಂಚೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಾಹೀರಾತು ಸಹ ರಿಲೀಸ್ ಆಗಿ ವೈರಲ್ ಆಗುತ್ತಿದೆ. ಬಹಳ ಸೊಗಸಾಗಿ ಅದನ್ನು ಕಟ್ಟಿಕೊಡಲಾಗಿದೆ. ಕನ್ನಡದಲ್ಲಿ ಈ ಜಾಹೀರಾತು ಮೂಡಿ ಬಂದಿದೆ.
“ವಿವಿಧತೆಯಲ್ಲಿ ಏಕತೆ ನಮ್ಮ ಹೆಮ್ಮೆ. ಪ್ರತಿ ನೂರು ಕಿಲೋಮೀಟರ್‌ಗೆ ಒಂದು ಸಂಸ್ಕೃತಿ ಆದರೆ ನೆಲೆ ಒಂದೇ. ಹೊಸ ಮನೆಯ ಗೃಹ ಪ್ರವೇಶದ ಹಾಗೆ. ಹಾಲು ಉಕ್ಕಿದರೂ ಹುಗ್ಗಿ ಉಕ್ಕಿದರೂ ಹರುಷದ ಘೋಷ ಒಂದೇ ಆಹಾ ಸಕ್ಕರ್ ಪಂಗಲ್, 200 ಕಿಲೋ ಮೀಟರ್ ದಾಟಿದರೆ ಉಟೋಪಚಾರ ಬದಲಾಗುತ್ತದೆ. ಆದರೆ ಸಂಕ್ರಾಂತಿ ಸಿಹಿ ಇರಲಿ, ಓಣಂನ ಸವಿ ಇರಲಿ ರುಚಿ ಒಂದೇ. 400 ಕಿಲೋ ಮೀಟರ್ ದಾಟಿದರೆ ಭಾಷೆ ಬದಲಾಗುತ್ತದೆ. ಆದರೆ ಮನ ತುಂಬಿ ಹಾರೈಸುವುದು ಒಂದೇ ಸದಾ ಸುಖವಾಗಿರಿ. 600 ಕಿಲೋಮೀಟರ್ ದಾಟಿದರೆ ಆಚಾರ ವಿಚಾರ ಬದಲಾಗುತ್ತದೆ ಆದರೆ ಮನಸ್ಸುಗಳು ಒಂದಾಗಿಸುವ ಬಾಂಧವ್ಯ ಒಂದೇ” ಎಂದು ರಿಷಬ್ ವಾಯ್ಸ್ ಓವರ್ ಹಿನ್ನೆಲೆಯಲ್ಲಿ ಜಾಹೀರಾತು ಬಂದಿದೆ.