ಡೀಪ್ ಫೇಕ್ ವಿಡಿಯೋ ವಿಚಾರ ಬಹಳ ಸಮಯದಿಂದ ಸುದ್ದಿಯಲ್ಲಿದೆ, ಇಲ್ಲಿಯವರೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಡೀಪ್ ಫೇಕ್ ವೀಡಿಯೊಗಳು ವೈರಲ್ ಆಗಿದೆ.
ಡೀಪ್ ಫೇಕ್ ಗಳನ್ನು ನಿಯಂತ್ರಿಸಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಡೀಪ್ ಫೇಕ್ ಗಳ ವಿಷಯದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಳ್ಳುತ್ತದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
ಗೂಗಲ್ ಒಡೆತನದ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಯೂಟ್ಯೂಬ್ ಸೆಲೆಬ್ರಿಟಿಗಳನ್ನು ಒಳಗೊಂಡ ಒಳಗೊಂಡ 1,000 ಕ್ಕೂ ಹೆಚ್ಚು ವೀಡಿಯೊಗಳನ್ನು ಡಿಲೀಟ್ ಮಾಡಿದೆ.
ಪ್ಲಾಟ್ಫಾರ್ಮ್ನಲ್ಲಿ ಎಐ ಸೆಲೆಬ್ರಿಟಿ ಹಗರಣದ ಜಾಹೀರಾತುಗಳನ್ನು ತಡೆಯಲು ಕಂಪನಿಯು ಭಾರಿ ಹೂಡಿಕೆ ಮಾಡುತ್ತಿದೆ ಎಂದು ಯೂಟ್ಯೂಬ್ ಸ್ಪಷ್ಟಪಡಿಸಿದೆ. ತನಿಖೆಯ ನಂತರ, ಸ್ಟೀವ್ ಹಾರ್ವೆ, ಟೇಲರ್ ಸ್ವಿಫ್ಟ್ ಮತ್ತು ಜೋ ರೋಗನ್ ಅವರಂತಹ ಸೆಲೆಬ್ರಿಟಿಗಳ ಎಐ ವೀಡಿಯೊಗಳು ಸೇರಿದಂತೆ 1000 ಕ್ಕೂ ಹೆಚ್ಚು ವೀಡಿಯೊಗಳನ್ನು ತೆಗೆದುಹಾಕಲು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯೂಟ್ಯೂಬ್ ಹೇಳಿದೆ.