ದಾಸ ದರ್ಶನ್ ಹಲವು ಬಿರುದು ಪಡೆದುಕೊಂಡಿದ್ದಾರೆ. ಆದರೆ ಯಾವುದನ್ನೂ ಎಲ್ಲೂ ಹೇಳಿಕೊಂಡಿಲ್ಲ. ಕಾಟೇರ ಬಳಿಕ ರೈತರ ಕೊಟ್ಟು ಭೂಮಿ ಪುತ್ರ ಬಿರುದನ್ನ ಬಹುಶಃ ಎಲ್ಲ ಕಡೆಗೆ ಹೇಳುತ್ತಾರೆ ಅನಿಸುತ್ತದೆ. ಈ ಒಂದು ಬಿರುದಿಗೂ ಕಾಟೇರ ಚಿತ್ರಕ್ಕೆ ಸಂಬಂಧ ಇದೆ.
ರೈತರನ್ನೆ ಕೇಂದ್ರವಾಗಿಟ್ಟುಕೊಂಡು ಬಂದ ಈ ಚಿತ್ರ ರಾಜ್ಯದ ರೈತರ ಹೃದಯ ಗೆದ್ದಿದೆ. ಆ ಒಂದು ಖುಷಿಯಲ್ಲಿಯೇ ರಾಜ್ಯ ರೈತರ ಸಂಘದ ಎಲ್ಲ ಸದಸ್ಯರು ಸೇರಿಯೇ ಕನ್ನಡ ನಾಡಿನ ಈ ದಾಸನಿಗೆ ಇದೀಗ ಭೂಮಿ ಪುತ್ರ ಅನ್ನುವ ಒಂದು ಬಿರುದು ಕೊಟ್ಟಿದ್ದಾರೆ. ಎಲ್ಲ ಜಿಲ್ಲೆಯ ಮಣ್ಣಿನ ಜೊತೆಗೆ ಒಂದು ಟಗರು ಕೂಡ ಗಿಫ್ಟ್ ಮಾಡಿದ್ದಾರೆ.
ಹೀಗೆ ದಾಸ ದರ್ಶನ್ ಹೆಸರಿನ ಮೊದಲು ಭೂಮಿ ಪುತ್ರ ಅನ್ನುವ ಹೆಸರು ಕೇಳಿ ಬರಲಿದೆ. ಇದರ ಇನ್ನಷ್ಟ ಮಾಹಿತಿ ಇಲ್ಲಿದೆ .
ದಾಸ ದರ್ಶನ್ ಹೆಸರಿನ ಮೊದಲು ಹಲವು ಬಿರುದುಗಳು ಇವೆ. ಅವುಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನ್ನೋದೇ ಆಗಿದೆ. ಮೊನ್ನೆ ದುಬೈನಲ್ಲೂ ಕನ್ನಡಿಗರು ಕರುನಾಡ ಅಧಿಪತಿ ಅಂತ ಕೊಟ್ಟಿದ್ದರು. ಅದಾದ್ಮೇಲೆ ಕಾಟೇರ ಚಿತ್ರದ ಬಳಿಕ ಇದೀಗ ಎರಡನೇ ಸಲ ದಾಸ ದರ್ಶನ್‌ಗೆ ಭೂಮಿ ಪುತ್ರ ಅನ್ನುವ ಟೈಟಲ್ ಬಂದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಈ ಒಂದು ಬಿರುದು ಕೊಡಲಾಗಿದೆ. ಕಾಟೇರ ಅಭಿನಂದನಾ ಸಮಾರಂಭದಲ್ಲಿಯೇ ದರ್ಶನ್ ಅವರಿಗೆ ಈ ಒಂದು ಬಿರುದು ಕೊಡಲಾಗಿದೆ. ರಾಜ್ಯ ರೈತ ಸಂಘ ಈ ಒಂದು ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಇದೇ ವೇದಿಕೆ ಮೇಲೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಈ ಒಂದು ಬಿರುದು ಕೊಟ್ಟರು.