ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯವರನ್ನು ಶಾಸಕ ಜನಾರ್ದನ ರೆಡ್ಡಿಯವರು ಹಾಡಿ ಹೊಗಳಿದ್ದು, ಈಗ ಅವರು ಮತ್ತೆ ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದಾವೆ.

ಅವರು ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಶ್ರೀರಾಮಮಂದಿರ ನಿರ್ಮಾಣದಲ್ಲಿ ಮೋದಿಜೀಯವರನ್ನು ಅಭಿನಂದಿಸಬೇಕು.

ಮೋದಿಯವರು ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ. 500 ವರ್ಷದ ಹೋರಾಟಕ್ಕೆ ಫಲ ಇದೀಗ ಅಂತ ಹೇಳಿದರು. ಇದೇ ವೇಳೆ ಅವರು ಸೋಲಿನ ಹತಾಶೆ ಇಕ್ಬಾಲ್ ಅನ್ಸಾರಿಯನ್ನು ಕಾಡುತ್ತಿದೆ. ಗಂಗಾವತಿ ಅಭಿವೃದ್ಧಿಗೆ ಸಹಕಾರವನ್ನು ನೀಡುತ್ತಿಲ್ಲ ಅಂತ ಅವರು ಅನ್ಸಾರಿ ವಿರುದ್ದ ಕಿಡಿಕಾರಿದರು. ಇನ್ನೂ ಎಂಪಿ ಚುನಾವಣೆ ಆದ ಮೇಲೆ ಕಾಂಗ್ರೆಸ್ ನವರು ಇಕ್ಬಾಲ್ ಅನ್ಸಾರಿಯನ್ನು ಡಸ್ಟ್ ಬಿನ್‍ಗೆ ಹಾಕುತ್ತಾರೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *