ಚಿಂಚೋಳಿ: ದಿನ ನಿತ್ಯದ ಖರ್ಚು ಮತ್ತು ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ ಮಗ ತನಗೆ ಮದುವೆ ಮಾಡಿಲ್ಲ ಎಂದು ಸಿಟ್ಟಿಗೆದ್ದು ತಾಯಿಯನ್ನೇ ಕೊಂದ ಘಟನೆ ತೆಲಂಗಾಣ ಗಡಿಗೆ ಹೊಂದಿಕೊಂಡ ಪೋಚಾವರಂ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಗ್ರಾಮದ ಶೋಭಾ ಅಂಜಪ್ಪ ಬ್ಯಾಗೇರಿ (45) ಕೊಲೆಯಾದ ನತದೃಷ್ಟ ತಾಯಿ.
ಮೃತಳ ಪುತ್ರ ಅನಿಲಕುಮಾರ ಅಂಜಪ್ಪ ಬ್ಯಾಗೇರಿ ಆರೋಪಿ. ಮರಣೋತ್ತರ ಪರೀಕ್ಷೆಗೆ ಶವ ಸಾಗಿಸಲಾಗಿದೆ. ಆರೋಪಿ ಬಂಧನಕ್ಕೆ ತಂಡ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ವೆಂಕಟೇಶ ನಾಯಕ ಭೇಟಿ ನೀಡಿದ್ದಾರೆ.