ಬೆಂಗಳೂರು: ಬಿಗ್‌ ಬಾಸ್‌ ಕನ್ನಡ-11 ದ ಆರಂಭಿಕ ವಾರದಲ್ಲೇ ಸ್ಪರ್ಧಿಗಳ ನಡುವಿನ ಕಿತ್ತಾಟ ತಾರಕಕ್ಕೇರಿದೆ.

ಶೋ ಶುರುವಾದ ಎರಡು – ಮೂರುದಿನದಲ್ಲೇ ʼಸ್ವರ್ಗ – ನರಕʼವಾಗಿದ್ದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಟಾಸ್ಕ್‌ , ನಿಯಮ ಎಲ್ಲವನ್ನೂ ಕೆಲ ಸ್ಪರ್ಧಿಗಳ ಉಲ್ಲಂಘಿಸುವ ಮೂಲಕ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಜಗಳವೇ ಹೈಲೈಟ್‌ ಆಗುವಂತೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗದು.

ಚೈತ್ರಾ ಕುಂದಾಪುರ, ಯುಮುನಾ ಅವರ ನಡುವೆ ಆರಂಭದಲ್ಲಿ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಕಳೆದ ಎರಡು ದಿನಗಳಿಂದ ಬಿಗ್‌ ಬಾಸ್‌ ಮನೆಯಲ್ಲಿ ʼವಕೀಲ್‌ ಸಾಬ್‌ʼ ಜಗದೀಶ್‌ ಅವರ ಡಾಮಿನೇಟ್‌ ಗೇಮ್‌ ಬಿಗ್‌ ಬಾಸ್‌ ಸಹ ಸ್ಪರ್ಧಿಗಳು ಗರಂ ಆಗುವಂತೆ ಮಾಡಿದೆ.

ಟಾಸ್ಕ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಧನರಾಜ್‌ ಅವರನ್ನು ಒಂದು ರೀತಿ ವ್ಯಂಗ್ಯವಾಗಿಸಿಕೊಂಡು ಮಾತನಾಡಿದ ಜಗದೀಶ್‌ ಆ ಬಳಿಕ ಮಾನಸ ಅವರಿಗೆ ಯಾವ ಸೀಮೆ ಹೆಣ್ಣು ಎಂದು ಹೇಳಿದ್ದರು. ಇದಾದ ನಂತರ ಉಗ್ರಂ ಮಂಜು, ಧರ್ಮ ಕೀರ್ತಿರಾಜ್‌, ತ್ರಿವಿಕ್ರಮ್‌, ಶಿಶಿರ್‌ ಶಾಸ್ತ್ರಿ ಅವರ ಜತೆಯೂ ಜಗದೀಶ್‌ ಮಾತಿನ ಮಲ್ಲಯುದ್ಧವನ್ನು ನಡೆಸಿದ್ದಾರೆ.

ನಾನು ಆಚೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡುತ್ತೇನೆ ಎಂದು ಜಗದೀಶ್‌ ಕ್ಯಾಮೆರಾ ಮುಂದೆ ಹೇಳಿದ್ದಾರೆ.

Leave a Reply

Your email address will not be published. Required fields are marked *