ಮುಂಬೈ: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಹೊರತಾದ ವಿಚಾರಗಳಿಂದಲೇ ಸುದ್ದಿಯಾಗುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟೊಂದನ್ನು ಹಾಕಿ ತೀವ್ರ ಕುತೂಹಲ ಮೂಡಿಸಿದ್ದಾರೆ.
“ಸದ್ಯದಲ್ಲೇ ದೊಡ್ಡ ಸಂಗತಿಯೊಂದನ್ನು ಪ್ರಕಟಿಸಲಿದ್ದೇನೆ’ ಎನ್ನುವ ಮೂಲಕ ಏನನ್ನು ಪ್ರಕಟಿಸಬಹುದು ಎಂಬ ಊಹಾಪೋಹ ಹುಟ್ಟಿಕೊಳ್ಳಲು ಕಾರಣವಾಗಿದ್ದಾರೆ.
ಅವರು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡವನ್ನು ತೊರೆಯಬಹುದು ಎಂದು ಊಹಿಸಲಾಗಿದೆ.
ಕುತೂಹಲಕಾರಿಯಾಗಿ, ಐಪಿಎಲ್ ಫ್ರಾಂಚೈಸಿಗಳು ತಮ್ಮ ರೆಟೆನ್ಶನ್ ಪಟ್ಟಿಯನ್ನು ಪ್ರಕಟಿಸಲು ಕೆಲವೇ ದಿನಗಳು ಇರವುಂತೆ ಹಾರ್ದಿಕ್ ಈ ರೀತಿ ಪೋಸ್ಟ್ ಹಾಕಿದ್ದಾರೆ.
ಅಕ್ಟೋಬರ್ 31 ರ ಒಳಗೆ, ಪ್ರತಿ ಐಪಿಎಲ್ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಎಲ್ಲಾ ಆಟಗಾರರ ಹೆಸರುಗಳ ಪಟ್ಟಿಯನ್ನು ಅನಾವರಣಗೊಳಿಸಬೇಕಿದೆ.