ಪರಿಸರವಾದಿ ತುಳಸಿ ಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ಸಂರಕ್ಷಣೆಗೆ ಮಾರ್ಗದರ್ಶಕ ಜ್ಯೋತಿಯಾಗಿ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಪೂಜ್ಯ ಪರಿಸರವಾದಿ ಮತ್ತು ಪದ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಪ್ರಕತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ನಮ ಪರಿಸರವನ್ನು ಸಂರಕ್ಷಿಸಲು ತಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಮೋದಿ ಎಕ್‌್ಸ ಮಾಡಿದ್ದಾರೆ.
ಅವರು ಪರಿಸರ ಸಂರಕ್ಷಣೆಗಾಗಿ ಮಾರ್ಗದರ್ಶಿ ಬೆಳಕಾಗಿ ಉಳಿಯುತ್ತಾರೆ. ಅವರ ಕೆಲಸವು ನಮ ಗ್ರಹವನ್ನು ರಕ್ಷಿಸಲು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ, ಅವರು ಸೇರಿಸಿದ್ದಾರೆ.
ತುಳಸಿಗೌಡ ಅವರು ವಯೋಸಹಜ ಕಾಯಿಲೆಗಳಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾಳಿ ಗ್ರಾಮದ ತಮ ನಿವಾಸದಲ್ಲಿ ನಿಧನರಾದರು. ಆಕೆಗೆ 86 ವರ್ಷವಾಗಿತ್ತು. ಹಾಲಕ್ಕಿ ಜನಾಂಗಕ್ಕೆ ಸೇರಿದ ಇವರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರ ಕೆಲಸವನ್ನು ಗುರುತಿಸಿ, ಅವರಿಗೆ 2021 ರಲ್ಲಿ ಪದಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.