ಯಳಂದೂರು ಪಟ್ಟಣದ ಬಿ ಆರ್ ಸಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಐದು ದಿನ ನಲಿ ಕಲಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಶಿಕ್ಷಕರಿಗೆ ಬೀಳ್ಕೊಡುಗೆ ನೀಡಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರಾಯ್ಯ ರವರು ಮಾತನಾಡಿ ನಲಿ ಕಲಿ ತರಗತಿ ನಿರ್ವಹಣೆಯ ಸವಾಲುಗಳು ಹಾಗೂ ಹೊಸ ಬದಲಾವಣೆಗಳ ಮಾಹಿತಿಗಾಗಿ ತರಬೇತಿಗಳು ಅವಶ್ಯಕ ಮತ್ತು ಇಲ್ಲಿ ಪಡೆದುಕೊಂಡ ಅಂಶಗಳನ್ನು ತಮ್ಮ ತಮ್ಮ ಶಾಲೆಗಳ ತರಗತಿಯಲ್ಲಿ ನಲಿ ಕಲಿ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸಬೇಕೆಂದು ಸಲಹೆ ನೀಡಿದರು.
ನಂತರ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆರ್. ನಂಜುಂಡಯ್ಯ ರವರು ಮಾತನಾಡಿ ಶಿಕ್ಷಣ ಇಲಾಖೆಯಲ್ಲಿ ವಿಶೇಷ ಅನುಭವವುಳ್ಳ ಸಂಪನ್ಮೂಲ ಶಿಕ್ಷಕರು ನಲಿಕಲಿ ತರಬೇತಿ ಕಾರ್ಯಕ್ರಮದಲ್ಲಿ ಉತ್ತಮವಾದ ತಮ್ಮ ಅನುಭವದ ಮೂಲಕ ಶಿಕ್ಷಕರಿಗೆ ತರಬೇತಿ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಇಂತಹ ಸಂಪನ್ಮೂಲ ಶಿಕ್ಷಕರ ಅನುಭವವನ್ನು ತಾಲೂಕಿನಲ್ಲಿ ತರಬೇತಿ ಪಡೆದಎಲ್ಲಾ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರಾಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆರ್. ನಂಜುಂಡಯ್ಯ,ಸಿ ಇ ಓ, ಶಾಂತರಾಜು , ಬಿಆರ್ ಪಿ.ಗಳಾದ ಪುಷ್ಪಲತಾ, ನಂಜುಂಡಸ್ವಾಮಿ,ಸತೀಶ್,ಸಿ ಆರ್ ಪಿ ಗಳಾದ ರೇಚಣ್ಣ, ಭಾರತಿ, ಶಶಿರೇಖಾ, ನಂದೀಶ್ ಹಾಗೂ ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿದರು.

ವರದಿ.ಎಸ್. ಪುಟ್ಟಸ್ವಾಮಿಹೊನ್ನೂರು

Leave a Reply

Your email address will not be published. Required fields are marked *