ಮಧ್ಯಪ್ರದೇಶದ ದೇವಾಸ್‌‍ ಜಿಲ್ಲೆಯಲ್ಲಿ ಮನೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ದಂಪತಿ ಮತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ನಯಾಪುರ ಪ್ರದೇಶದಲ್ಲಿ ಬೆಳಗಿನ ಜಾವ 4.45ರ ಸುಮಾರಿಗೆ ಮನೆಯ ಆವರಣದಲ್ಲೇ ಇದ್ದ ಹಾಲಿನ ಪಾರ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅದೇ ಆವರಣದಲ್ಲಿ ಕುಟುಂಬವೊಂದು ವಾಸವಿತ್ತು ಎಂದು ನಹರ್‌ ದರ್ವಾಜ ಪೊಲೀಸ್‌‍ ಠಾಣೆ ಅಧಿಕಾರಿ ಮಂಜು ಯಾದವ್‌ ತಿಳಿಸಿದ್ದಾರೆ.

ಸಂತ್ರಸ್ತರಾದ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಉಸಿರುಗಟ್ಟುವಿಕೆ ಮತ್ತು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ.

ಮೃರತನ್ನು ದಿನೇಶ್‌ ಕಾರ್ಪೆಂಟರ್‌ (35), ಅವರ ಪತ್ನಿ ಗಾಯತ್ರಿ (30), 10 ವರ್ಷದ ಮಗಳು ಇಶಿಕಾ (10) ಮತ್ತು ಏಳು ವರ್ಷದ ಮಗ ಚಿರಾಗ್‌ ಎಂದು ಗುರುತಿಸಲಾಗಿದೆ.
ದಿನೇಶ್‌ ಅವರು ಕಟ್ಟಡದ ನೆಲ ಮಹಡಿಯಲ್ಲಿ ಡೈರಿ ಹೊಂದಿದ್ದು, ಎರಡನೇ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಪುನೀತ್‌ ಗೆಹ್ಲೋಟ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *