ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅಪಮಾನಕರ ಮಾತುಗಳನ್ನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಕಾನೂನು ವಿಭಾಗದಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ನಡೆಸಿದ ಯತ್ನವನ್ನು ಪೆÇಲೀಸರು ತಡೆದರು.
ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅಮಿತ್ ಶಾ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಶಾ, ನರೇಂದ್ರ ಮೋದಿಗೆ ದಿಕ್ಕಾರ, ಜೈ ಜೈ ಅಂಬೇಡ್ಕರ್, ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ಅಂಬೇಡ್ಕರ್ ನಮ್ಮ ಮನೆ ದೇವರು ಮೊದಲಾದ ಘೋಷಣೆಗಳನ್ನು ಕೂಗಿದರು. ನಂತರ, ಅಮಿತ್ ಶಾ ಅವರ ಭಾವಚಿತ್ರಗಳುಳ್ಳ ಪೆÇೀಸ್ಟರ್‍ಗಳನ್ನು ಸುಟ್ಟು ಹಾಕಿದರು. ಬಳಿಕ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನು ರಸ್ತೆಯಲ್ಲಿ ಪೆÇಲೀಸರು ತಡೆದರು.
ಬಿಜೆಪಿ ಕಚೇರಿಯನ್ನು ಸಂಪರ್ಕ ಮಾಡುವ ನಾಲ್ಕು ದಿಕ್ಕುಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಮುಚ್ಚಿದ್ದ ಪೆÇಲೀಸರು ಆರ್‍ಟಿಒ ಕಚೇರಿ ಮಾರ್ಗದಲ್ಲಿ ತಡೆದು ನಿಲ್ಲಿಸಿದರು. ಈ ವೇಳೆ ಬ್ಯಾರಿಕೇಡ್‍ಗಳನ್ನು ತಳ್ಳಿ ಹೊರಬರಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ನಿಯಂತ್ರಿಸಿದರು. ನಂತರ ಪ್ರತಿಭಟನೆ ಕೈಬಿಡುವಂತೆ ಪೆÇಲೀಸರು ಮನವಿ ಮಾಡಿದರೂ ಜಗ್ಗಲಿಲ್ಲ. ಬಳಿಕ ಪೆÇಲೀಸ್ ವಾಹನಗಳನ್ನು ತಂದು ಬಂಧಿಸಲು ಮುಂದಾದಾಗ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ಕೈಬಿಟ್ಟು ತೆರಳಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟ ಮಾಡಿದ್ದ ಕಾಂಗ್ರೆಸ್, ಇಂದು ಬಿಜೆಪಿಯನ್ನು ಭಾರತದಿಂದ ತೊಲಗಿಸಲು ಹೋರಾಟ ಮಾಡಬೇಕಿದೆ. ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಾವೆಲ್ಲರೂ ಇದ್ದೇವೆ. ಬಿಜೆಪಿ ನಾಯಕರು ಸಂವಿಧಾನ ನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಗೃಹ ಸಚಿವರನ್ನಾಗಿ ಮಾಡಿರುವುದೇ ಖಂಡನೀಯ. ಅಂಬೇಡ್ಕರ್ ಎಂಬುದು ಕೇವಲ ಹೆಸರಲ್ಲ ನಮ್ಮೆಲ್ಲರ ಉಸಿರು. ಅಂಬೇಡ್ಕರ್ ಕುರಿತು ಅವಹೇಳನ ಮಾಡಿರುವ ಅಮಿತ್ ಶಾ ಎಂಬ ವ್ಯಕ್ತಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.