ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್‌ ಅವರು ನಮನ್ನು ಆಗಲಿ ಇಂದಿಗೆ 15 ವರ್ಷಗಳೇ ಕಳೆದು ಹೋದವು. ಆದರೆ ಅವರು ಅಭಿನಯದ ಚಿತ್ರಗಳು ಮಾತ್ರ ಅವರನ್ನು ಇಂದಿಗೂ ಜೀವಂತವಾಗಿರಿಸಿವೆ.

ನಾಗರ ಹಾವಿನ ರಾಮಾಚಾರಿ ಕನ್ನಡ ಚಿತ್ರರಂಗದಲ್ಲಿ ಸಿಂಹದಂತೆ ಘರ್ಜಿಸಿ ಇಟ್ಟ ಹೆಜ್ಜೆಗಳ ಗುರುತುಗಳು ಮಾಸದಷ್ಟು ಗಟ್ಟಿಯಾಗಿವೆ. ಅಭಿಮಾನಿಗಳು ಅವರನ್ನು ಸದಾ ಒಂದಲ್ಲ ಒಂದು ರೀತಿಯಲ್ಲಿ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.

ಇಂದು 15ನೇ ಪುಣ್ಯ ಸರಣೆ ಅಂಗವಾಗಿ ರಾಜ್ಯದೆಲ್ಲಡೆ ತಮ ಪ್ರೀತಿಯ ಕರ್ಣನನ್ನ ವಿವಿಧ ರೀತಿಯಲ್ಲಿ ನೆನೆಯುತ್ತಿದ್ದಾರೆ. ರಕ್ತದಾನ ಶಿಬಿರ, ಅನ್ನಸಂಪರ್ಪಣೆ, ಉಚಿತ ವೈದ್ಯಕೀಯ ತಪಾಸಣೆ, ಶಾಲಾ ಮಕ್ಕಳಿಗೆ ಆರ್ಥಿಕ ನೆರವು ಹೀಗೆ ವಿವಿಧ ರೀತಿಯಲ್ಲಿ ತಮ ನೆಚ್ಚಿನ ನಟನನ್ನು ಸರಿಸಿ ಪೂಜಿಸುತ್ತಿದ್ದಾರೆ. ಅಕಾಲಿಕವಾಗಿ ಅವರು ನಮನ್ನ ಆಗಲಿಲ್ಲವೆಂದಿದ್ದರೆ ಇಂದು ಕನ್ನಡ ಚಿತ್ರರಂಗದ ಯಜಮಾನನಾಗಿ ಮೆರೆಯುತ್ತಿದ್ದರು. ವಿಧಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ಎನ್ನುವುದೇ ಎಲ್ಲರ ಅಳಲು

Leave a Reply

Your email address will not be published. Required fields are marked *