ಓಂ ಶಕ್ತಿ ಯುವ ಮಿತ್ರ ಮಂಡಳಿ . ವಿ ಎಸ್ ಗಾರ್ಡನ್ ಬೆಂಗಳೂರು. ಓಂ ಶಕ್ತಿ ಅಂಗಾಲಪರಮೇಶ್ವರಿ ದೇವಸ್ಥಾನ . #ಓಂ ಶಕ್ತಿ ಮಾಲೆ ಇರುಮುಡಿ ಮತ್ತು ನೂತನ ದೇವಸ್ಥಾನ ಮಂಡಳಿ ಪೂಜೆ ಕಾರ್ಯಕ್ರಮ # ಬೋಧಿನಾಮ ಸಂವತ್ಸರ ಪುಷ್ಪ ಮಾಸ ಹೇಮಂತ ಋತು ಶುಕ್ಲ ಪಕ್ಷ ಪೂರ್ವಭದ್ರ ನಕ್ಷತ್ರ ಸಿದ್ಧಯೋಗದಂದು. ಶಿವಂ ಶಕ್ತಿ ಇರುಮುಡಿ ಯಾತ್ರೆಯು ಹಾಗೂ ನೂತನ ದೇವಸ್ಥಾನದ ಮಂಡಳಿ ಪೂಜೆ ಕಾರ್ಯಕ್ರಮ ಅನ್ನದಾನ ಮತ್ತು ಧಾರ್ಮಿಕ ಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು ಈ ಒಂದು ಮಹಾದೈವಿಕ ಕಾರ್ಯಕ್ಕೆ ಮಲೇಶಿಯಾ ಪ್ರಾಂತ್ಯದಿಂದ ಶ್ರೀ ಶ್ರೀ. ಶಿವ ಶ್ರೀ ಬಾಲಣ್ ರವರಿಂದ ವಿಶೇಷವಾದ ಮಂಡಳಿ ಅಭಿಷೇಕ ಹಾಗೂ ಲೋಕಕಲ್ಯಾಣ ಅರ್ಥಕ್ಕಾಗಿ ಪೂಜೆ ಸಲ್ಲಿಸಲಾಯಿತು ಅವರೊಂದಿಗೆ ಶ್ರೀ ಓಂ ಶಕ್ತಿ ಮಹಾ ಗುರುಗಳಾದ ಶ್ರೀ ಶಶಿಕುಮಾರ್ ಅವರು ಲೋಕಕಲ್ಯಾಣಕ್ಕಾಗಿ ಮತ್ತು ಬಡಾವಣೆಯ ಒಲಿತಿಗಾಗಿ ಹ ಓಂ ಶಕ್ತಿಅಂಗಾಲಪರಮೇಶ್ವರಿ ತಾಯಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಒಂದು ವಿಶೇಷವಾದ ಇರುಮುಡಿ ಮತ್ತು ನೂತನ ದೇವಸ್ಥಾನ ಮಂಡಳಿ ಪೂಜೆ ಕಾರ್ಯಕ್ರಮಕ್ಕೆ ದೈವಿಕ ಪ್ರೇಮಿ ಪರಿಸರ ಪ್ರೇಮಿ ಡಾಕ್ಟರ್ ಈಶ್ವರ್ ಎಸ್ ರಾಯ್ಡು ರವರು ಮತ್ತು ಪರಿಸರ ಪ್ರೇಮಿ ವ್ಯಾಟ್ಸಪ್ ಗ್ರೂಪ್ ಸ್ನೇಹ ಬಳಗದವರು ಭಾಗವಹಿಸಿದ್ದರು ಹಾಗೂ ಡಾಕ್ಟರ್ ಈಶ್ವರ್ ಎಸ್. ರಾಯುಡು ರವರು ಸಕಲ ಜೀವನರಾಸಿಗಳಿಗಾಗಿ ಎಲ್ಲ ಧರ್ಮದ ಜನತೆಯ ಒಳಿತಿಗಾಗಿ ಓಂ ಶಕ್ತಿ ಅಂಗಾಲಪರಮೇಶ್ವರಿ ತಾಯಿಗೆ ವಿಶೇಷ ಪೂಜೆ ಸಲಿಸಿದರು. ಈ ಸಂದರ್ಭದಲ್ಲಿ ಸುಮಾರು 2000 ಜನ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಯಿತು.